ನನಗೆ ಇಷ್ಟೇ ಸಾಕಾಯ್ತು!
![]() |
| Captured by VarshaClicks |
ಕ್ಷಣಕಾಲ ಕುಳಿತೆ ಕಣ್ಮುಚ್ಚಿ ನಿನ್ನಾಗಮನಕ್ಕೆ,
ನನಗಿಂತ ಪ್ರಕೃತಿಯೇ ಹೆಚ್ಚು ಕಾದಂತಿದೆ.
ಬಿಡದೆ ತಂಗಾಳಿ ಬೀಸುತ್ತಿದೆ,
ಬಿಳಿ ಪಾರಿಜಾತ ಗಿಡದಿಂದುದುರಿ
ನನ್ನ ಮಡಿಲನ್ನು ತುಂಬುತ್ತಿದೆ.
ಅಗೋ, ಕ್ಷಣಕಾಲ ಎಲ್ಲಾ ಸ್ತಬ್ಧ!
ನೀ ಬಂದೇಬಿಟ್ಟೆ ಎಂಬಂತಹ ವಾತಾವರಣ..
ಒಮ್ಮಿಂದೊಮ್ಮೆಗೆ ಗಾಳಿಯಲ್ಲಿ ಸಂಗೀತ ಕೇಳಿತು,
ಪಾರಿಜಾತ ಯುಗಳ ಗೀತೆ ಹಾಡಿತು...
ನಾನಾದರೂ ಕೆನ್ನೆ ತುಂಬಾ ರಂಗು ತುಂಬಿಕೊಂಡು,
ಹಲ್ಲುಗಳೂ ಸಾಕು ಎನ್ನುವಷ್ಟು ನಕ್ಕೆ!
ನಾಲಿಗೆ ಸುಡುವಷ್ಟು ಪ್ರೀತಿಯ ಮಾತುಗಳು
ತುದಿಯಲ್ಲಿ ಕಾದು ಕುಳಿತಿತ್ತು.
ಗುಲಾಲು ಹೂಗಳಿಂದ ತುಂಬಿತುಳುಕುತ್ತಿದ್ದ ಮರ
ಅಗಣಿತ ಹೂಗಳನ್ನು ನಿನ್ನ ಮೇಲೆ ಸುರಿಸಿ ಸ್ವಾಗತಿಸಿತು.
ನಿನ್ನ ಕಣ್ಣುಗಳಲ್ಲಿ ನಿರ್ಮಲ ಪ್ರೇಮವಿತ್ತು..
ಬೊಗಸೆ ತುಂಬಾ ಪಾರಿಜಾತ ಬೆಚ್ಚಗೆ ಮಲಗಿತ್ತು!
ನನಗೆ ಇಷ್ಟೇ ಸಾಕಾಯ್ತು!
ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.

