ಇದು ಗಡ್ ಬಡ್ ಕಥೆ!
ಕರಾವಳಿ ಭಾಗದ ಮಂಗಳೂರು ಹಾಗೂ ಉಡುಪಿ ತಮ್ಮ ವಿಶಿಷ್ಟ ಹಾಗೂ ರುಚಿಕರ ಖಾದ್ಯ ಶೈಲಿ , ಅಡುಗೆ ಜೊತೆಗೆ ಐಸ್ಕ್ರೀಮ್‌ಗೂ ಹೆಸರುವಾಸಿ. ಈ ಸಾಲಿನಲ್ಲಿ ಹೆಸರಿನಿಂದಲೇ ಸೆಳೆಯುವುದು "ಗಡ್ ಬಡ್". ಹೆಸರಲ್ಲೇ ಗಡಿಬಿಡಿ ಇದ್ದರೂ, ರುಚಿ ಮಾತ್ರ ಅದ್ಭುತ! ಕರಾವಳಿ ಕರ್ನಾಟಕದ ಹೆಮ್ಮೆ ಈ "ಗಡ್ ಬಡ್".
ಐಸ್ಕ್ರೀಮ್ ಸವಿಯಲು ಬಂದ ಗ್ರಾಹಕನಿಗೆ ಗಡಿಬಿಡಿಯಲ್ಲಿ ಐಸ್ಕ್ರೀಮ್ ಮಾಡಿ ಕೊಟ್ಟು, ಹೆಸರು ಕೇಳಿದಾಗ ಥಟ್ಟನೆ "ಗಡ್ ಬಡ್ ಐಸ್ಕ್ರೀಮ್" ಎಂದು ಹೇಳಿದ್ದು, ಹಾಗೆ ಈ ಐಸ್ಕ್ರೀಮ್ ಹುಟ್ಟಿದ್ದು ಎನ್ನುವ ಕಥೆಯಿದೆ. ಉಡುಪಿಯ ಡಯಾನಾ ಹೋಟೆಲ್ ಅಲ್ಲಿ ಈ ಐಸ್ಕ್ರೀಮ್ ಜನಿಸಿದ್ದು.
ಅತ್ತ ಕಡೆ ಪೂರ್ತಿ ಐಸ್ಕ್ರೀಮ್ ಅಲ್ಲ, ಇತ್ತ ಕಡೆ ಫ್ರೂಟ್ ಸಲಾಡ್ ಅಲ್ಲ. ಆದರೆ ಬಾಯಲ್ಲಿ ನೀರೂರಿಸುವ ರುಚಿ ಹೊಂದಿರುವ ವಿಶಿಷ್ಟ ಐಸ್ಕ್ರೀಮ್.
![]() |
| Captured by VarshaClicks |
ಬಗೆಬಗೆಯ ಹಣ್ಣು, ಒಣ ಹಣ್ಣು ಮತ್ತೊಂದಿಷ್ಟು ಕ್ರೀಮ್ ಅನ್ನು ದಂಡಿಯಾಗಿ ಸುರಿದರೆ ಗಡ್ ಬಡ್ ತಯಾರು. ಆದರೆ ಮನೆಯಲ್ಲಿ ತಯಾರಿಸಿದರೆ ನಿಜವಾದ ಗಡ್ ಬಡ್ ರುಚಿ ಬರುವುದು ಕಡಿಮೆ. ಅದನ್ನು ಕರಾವಳಿ ಕರ್ನಾಟಕ ಭಾಗದಲ್ಲಿಯೇ ಸವಿಯಬೇಕು!
ಇದನ್ನೂ ಓದಿ : ಬಿಸ್ಕತ್ ರೊಟ್ಟಿ ಕಮಾಲು
ಈಗ ಪ್ರಪಂಚದ ಯಾವ ಮೂಲೆಯಲ್ಲಿಯೂ ಈ ಐಸ್ಕ್ರೀಮ್ ಕಾಣಸಿಗುತ್ತದೆ. ಆದರೆ ಗಡ್ ಬಡ್ ಇಂದಿಗೂ ನಮ್ಮ ಭಾಗದ ಹೆಮ್ಮೆಯಾಗಿ ಉಳಿದುಕೊಂಡಿದೆ. ಮುಂದೆಯೂ ಉಳಿಯಲಿದೆ!
ಗಡ್ ಬಡ್ ಇಲ್ಲದ ಮೆನು ಇಲ್ಲ. ಗಡ್ ಬಡ್ ತಿನ್ನದ ಕರಾವಳಿಗನಿಲ್ಲ!
ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.

