ಕನ್ನಡ ನುಡಿಗಟ್ಟು ಸರಣಿ - ಸಂಚಿಕೆ ೭
ನಮಸ್ತೆ.
ಮಾತಿನ ನಡುವೆ ನುಡಿಗಟ್ಟು, ಗಾದೆಗಳನ್ನು ಬಳಸುವುದು ಒಂದು ಬಗೆಯ ಕಲೆಯೇ ಸರಿ. ನಿರ್ದಿಷ್ಟ ಸಂದರ್ಭ, ಸನ್ನಿವೇಶಕ್ಕೆ ಹೊಂದಿಕೊಳ್ಳುವಂತೆ ಇವುಗಳನ್ನು ಬಳಸುವವರು ಕಲಾವಿದರು!
ನುಡಿಗಟ್ಟುಗಳ ಬಳಕೆ ತುಸು ಕಡಿಮೆಯಾದರೂ, ಅವುಗಳಲ್ಲೊಂದು ಸೊಗಸಿದೆ. ಆ ಸೊಗಸಿನ ಪರಿಚಯಕ್ಕಾಗಿಯೇ ಆರಂಭಿಸಲಾದ ಸರಣಿಯಿದು.
ಪ್ರತೀ ಸಂಚಿಕೆಯಲ್ಲಿ ಒಂದಿಷ್ಟು ನುಡಿಗಟ್ಟುಗಳನ್ನು ಅವುಗಳ ಅರ್ಥ ಸಹಿತ ನೀಡುವ ಪುಟ್ಟ ಪ್ರಯತ್ನವಿದು. ಅಗತ್ಯವಿದ್ದಲ್ಲಿ ಉದಾಹರಣೆ ಹಾಗೂ ವ್ಯಾಖ್ಯಾನಗಳನ್ನು ನೀಡಲಾಗುವುದು.
ಇದನ್ನೂ ಓದಿ :
ಇವುಗಳನ್ನು ಕನ್ನಡ ಶಬ್ದಕೋಶದಿಂದ ಎರವಲು ಪಡೆಯಲಾಗಿದೆ. ವರ್ಣಮಾಲೆಯ ಕ್ರಮಾನುಸಾರವಾಗಿ ಪ್ರತೀ ಸಂಚಿಕೆಯಲ್ಲಿ ನುಡಿಗಟ್ಟುಗಳನ್ನು ನೀಡಲಾಗುತ್ತದೆ. ನಮ್ಮ ದೈನಂದಿನ ಮಾತುಕತೆಯಲ್ಲಿ, ಬರವಣಿಗೆಯಲ್ಲಿ ಇವುಗಳನ್ನು ಹಾಸುಹೊಕ್ಕಾಗಿಸಲು ಪ್ರಯತ್ನಿಸೋಣ.
ಸಂಚಿಕೆ ೭
ಕೈಗೆ ಬರು : ಸಿಕ್ಕು
ಕೈತೊಳೆ : ಕೆಲಸಮಾಡಿ ಮುಗಿಸಿ ಅದರ ಸಂಬಂಧವನ್ನು ಕಡಿದುಕೊಳ್ಳು
ಕೈನೋಡು : ಶಕ್ತಿ ಪರೀಕ್ಷಿಸು
ಕೈಬರಿದಾಗು : ಕೊಡುವುದಕ್ಕೆ ಏನೂ ಇಲ್ಲದಾಗು
ಕೈಬಾಯಿ ಶುದ್ಧವಿರು : ಕೆಲಸ, ಮಾತು ಎರಡೂ ಒಳ್ಳೆಯದಾಗಿರು
ಕೈಬಿಸಿಮಾಡು : ಲಂಚ ಕೊಡು
ಕೈಬೆಚ್ಚಗೆ ಮಾಡು : ಲಂಚ ಕೊಡು
ಕೈಮಾಡು : ಹೊಡೆ, ಮೇಲೆ ಬೀಳು
ಕೈಮೀರು : ಶಕ್ತಿ ಮೀರು
ಕೈಯೆತ್ತು : ಒಪ್ಪಿಗೆ ಸೂಚಿಸು
ಕೈಯೊಡ್ಡು : ಬೇಡು
ಕೈಸಡಿಲ ಬಿಡು : ಔದಾರ್ಯ ತೋರು
ಕೈಸುಡು : ಕೆಟ್ಟ ಅನುಭವವಾಗು, ನಷ್ಟವಾಗು
ಕೈಹಾಕು : ಪ್ರವೇಶಿಸು, ನೆರವು ನೀಡು
ಕೈಹಿಡಿ : ಮದುವೆಯಾಗು, ಮಿತವ್ಯಯ ತೋರು
ಕೊರಳಿಗೆ ಕಟ್ಟು : ಒತ್ತಾಯದಿಂದ ಸ್ವೀಕರಿಸುವಂತೆ ಮಾಡು
ಕೊರಳಿಗೆ ಬರು : ಪ್ರಾಣಾಪಾಯ ಒದಗು, ಸಂದಿಗ್ಧ ಪರಿಸ್ಥಿತಿಗೆ ಸಿಕ್ಕು
ಕೊಳೆಹಾಕು : ಬಹುಕಾಲ ನಿಲ್ಲಿಸಿಕೊಂಡಿರು
ಕ್ಷೌರವಾಗು : ನಷ್ಟವಾಗು
ಖಾರವಾಗಿರು : ಕೋಪ ತುಂಬಿರು
ಗಂಟಲ ಗಾಣ : ಪ್ರಾಣಕ್ಕೆ ಮಾರಕ
ಗಂಟಲು ದೊಡ್ಡದು ಮಾಡು : ಗಟ್ಟಿಯಾಗಿ ಕೂಗಿ ಮಾತಾಡು
ಗಂಟು ಕಟ್ಟು : ಹೊರಡಲು ಸಿದ್ಧವಾಗು
ಗಂಟು ಕರಗಿಹೋಗು : ಇದ್ದ ಹಣ ಖರ್ಚಾಗಿ ಹೋಗು
ಗಂಟು ತಿನ್ನು : ಕೊಟ್ಟ ಹಣ ಕೊಡದೆ ಮೋಸ ಮಾಡು
ಗಂಟು ಬೀಳು : ಸಂಬಂಧ ಉಂಟಾಗು
ಗಗನಕುಸುಮ : ಕೈಗೆ ಎಟುಕದ್ದು
ಗಣಪತಿ ಪೂಜೆ ಮಾಡು : ಪ್ರಾರಂಭಿಸು
ಗತಿ ಕಾಣಿಸು : ಮುಗಿಸು
ಗಾಯದ ಮೇಲೆ ಬರೆ ಎಳೆ : ಕಷ್ಟದ ಮೇಲೆ ಕಷ್ಟ ಕೊಡು
ಗಾಳ ಹಾಕು : ಪ್ರಲೋಭನೆ ತೋರಿಸು, ಮರುಳುಗೊಳಿಸು
ಗಾಳಿ ಗುದ್ದಿ ಮೈ ನೋಯಿಸಿಕೊಳ್ಳು : ವ್ಯರ್ಥವಾದ ಕೆಲಸದಲ್ಲಿ ತೊಡಗು
ಗಾಳಿಗೆ ತೂರಿಬಿಡು : ನಿರ್ಲಕ್ಷಿಸು
ಗಾಳಿಗೋಪುರ ಕಟ್ಟು : ಬರಿಯ ಕಲ್ಪನೆಗಳನ್ನು ಮಾಡುತ್ತಿರು
ಗಾಳಿ ಬೀಸು : ಪ್ರಭಾವ ಬೀರು, ಮುಗಿಯಲು ಬಿಡದಿರು
ಗಾಳಿ ಸಮಾಚಾರ : ಖಚಿತವಲ್ಲದ ವಾರ್ತೆ, ಹಾರಿಕೆ ಸುದ್ದಿ
ಗಾಳಿ ಹಾಕು : ಉತ್ತೇಜಿಸು
ಗುಟುಕುನೀರು ಕುಡಿಸು : ಪ್ರತೀಕಾರ ಮಾಡು, ತೊಂದರೆಕೊಡು
ಗುಡ್ಡವನ್ನು ಬೆಟ್ಟ ಮಾಡು : ಸಣ್ಣದನ್ನು ದೊಡ್ಡದು ಮಾಡಿಹೇಳು
ಗುಡಾರ ಎತ್ತು : ಹೊರಡು
ಗೋಣು ಚೆಲ್ಲು : ಸಾಯು
ಗೋತ ಹೊಡಿ : ಸಾಯು
ಗೋರಿ ತೋಡು : ಹಾಳುಮಾಡು, ಹಾಳು ಮಾಡಿಕೊಳ್ಳು
ಚಕ್ರಹಾಕು : ತಪ್ಪಿಸಿಕೊಳ್ಳು, ಮೋಸಮಾಡು
ಚಕಾರವೆತ್ತು : ಆಕ್ಷೇಪಣೆ ಮಾಡು
ಚಟ್ನಿಯಾಗು : ಅರೆದುಹೋಗು, ಕಷ್ಟಕ್ಕೆ ಸಿಕ್ಕು
ಚಳ್ಳೆಹಣ್ಣು ತಿನ್ನಿಸು : ಕಷ್ಟಕೊಡು, ಮೋಸಪಡಿಸು
ಚಿಟಿಕೆ ಚಪ್ಪರ : ಸಂಕ್ಷೇಪವಾಗಿ, ತೀವ್ರಗತಿಯಿಂದ
ಚಿಟುಕು ಮುಳ್ಳಾಡಿಸು : ಬಿಡದೆ ಒಂದೇ ಸಮನೆ ತೊಂದರೆ ಪಡಿಸು ಜನ್ಮ ಜಾಲಾಡು : ಚೆನ್ನಾಗಿ ಬಯ್ಯು
ಜುಟ್ಟು ಕೈಗೆ ಸಿಗು : ವಶವಾಗು, ಹಿಡಿತಕ್ಕೆ ಸಿಕ್ಕು
ಜೇಬಿಗೆ ತೂತು ಬೀಳು : ಹಣ ಖರ್ಚಾಗು
ಜೇಬಿಗೆ ಹಾಕಿಕೊಳ್ಳು : ವಶ ಮಾಡಿಕೊಳ್ಳು
ಟೋಪಿ ಹಾಕು : ಮೋಸಮಾಡು
ಡಂಗುರ ಹೊಡೆ : ಸಾರು, ಘೋಷಿಸು
ಡುಂಕಿ ಹೊಡೆ : ಅನುತ್ತೀರ್ಣನಾಗು ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.
