ಕನ್ನಡ ನುಡಿಗಟ್ಟು ಸರಣಿ - ಸಂಚಿಕೆ ೯

 ನಮಸ್ತೆ.


   ಮಾತಿನ ನಡುವೆ ನುಡಿಗಟ್ಟು, ಗಾದೆಗಳನ್ನು ಬಳಸುವುದು ಒಂದು ಬಗೆಯ ಕಲೆಯೇ ಸರಿ. ನಿರ್ದಿಷ್ಟ ಸಂದರ್ಭ, ಸನ್ನಿವೇಶಕ್ಕೆ ಹೊಂದಿಕೊಳ್ಳುವಂತೆ ಇವುಗಳನ್ನು ಬಳಸುವವರು ಕಲಾವಿದರು!


  ನುಡಿಗಟ್ಟುಗಳ ಬಳಕೆ ತುಸು ಕಡಿಮೆಯಾದರೂ, ಅವುಗಳಲ್ಲೊಂದು ಸೊಗಸಿದೆ. ಆ ಸೊಗಸಿನ ಪರಿಚಯಕ್ಕಾಗಿಯೇ ಆರಂಭಿಸಲಾದ ಸರಣಿಯಿದು.


ಪ್ರತೀ ಸಂಚಿಕೆಯಲ್ಲಿ ಒಂದಿಷ್ಟು ನುಡಿಗಟ್ಟುಗಳನ್ನು ಅವುಗಳ ಅರ್ಥ ಸಹಿತ ನೀಡುವ ಪುಟ್ಟ ಪ್ರಯತ್ನವಿದು. ಅಗತ್ಯವಿದ್ದಲ್ಲಿ ಉದಾಹರಣೆ ಹಾಗೂ ವ್ಯಾಖ್ಯಾನಗಳನ್ನು ನೀಡಲಾಗುವುದು. 




  ಇವುಗಳನ್ನು ಕನ್ನಡ ಶಬ್ದಕೋಶದಿಂದ ಎರವಲು ಪಡೆಯಲಾಗಿದೆ. ವರ್ಣಮಾಲೆಯ ಕ್ರಮಾನುಸಾರವಾಗಿ ಪ್ರತೀ ಸಂಚಿಕೆಯಲ್ಲಿ ನುಡಿಗಟ್ಟುಗಳನ್ನು ನೀಡಲಾಗುತ್ತದೆ. ನಮ್ಮ ದೈನಂದಿನ ಮಾತುಕತೆಯಲ್ಲಿ, ಬರವಣಿಗೆಯಲ್ಲಿ ಇವುಗಳನ್ನು ಹಾಸುಹೊಕ್ಕಾಗಿಸಲು ಪ್ರಯತ್ನಿಸೋಣ.


ಇದನ್ನೂ ಓದಿ : ಕನ್ನಡ ನುಡಿಗಟ್ಟು ಸರಣಿ - ಸಂಚಿಕೆ ೮


ಸಂಚಿಕೆ ೯


ದಡ ಕಾಣಿಸು : ಪಾರು ಮಾಡು, ಸಮಸ್ಯೆ ಬಗೆಹರಿಸು


ದಾರಿ ಕಾಣು : ಉಪಾಯ ಹೊಳೆ, ಅನುಕೂಲ ಮಾಡು


ದಾರಿ ಕಾಯು : ನಿರೀಕ್ಷಿಸು


ದಾರಿ ತಪ್ಪು : ಕ್ರಮವಲ್ಲದ ರೀತಿ ವರ್ತಿಸು, ಕೆಡು


ದಾರಿದೀಪ : ಮಾರ್ಗದರ್ಶಿ


ದಾರಿ ಸವೆಸು : ವ್ಯರ್ಥವಾಗಿ ತಿರುಗು


ದಿನ ಎಣಿಸು : ಸಾವನ್ನು ಎದುರುನೋಡು


ದ್ರಾವಿಡ ಪ್ರಾಣಾಯಾಮ : ಸುತ್ತು ಬಳಸು


ಧೂಳೀಪಟ ಮಾಡು : ನಾಶಮಾಡು


ನಡು ಕಟ್ಟು : ಸಿದ್ಧವಾಗು


ನಡುನೀರಿನಲ್ಲಿ ಕೈಬಿಡು : ಅರ್ಧದಲ್ಲೇ ಸಹಾಯ ನಿಲ್ಲಿಸು


ನಡುಬಗ್ಗಿಸು : ಶ್ರಮಪಡು


ನಾಯಿಜನ್ಮ : ಹೀನ ಬಾಳು


ನಾಯಿಬಾಳು : ಹೀನ ಬಾಳು


ನಾಲಿಗೆ ಉದ್ದಮಾಡು : ಅತಿಯಾಗಿ ಮಾತಾಡು


ನಾಲಿಗೆ ಉಳಿಸಿಕೊಳ್ಳು : ಮಾತಿನಂತೆ ನಡೆದುಕೊಳ್ಳು


ನಾಲಿಗೆ ಚುರುಕುಮಾಡು : ಜೋರಾಗಿ ಮಾತಾಡು


ನಾಲಿಗೆ ಬಿಗಿಹಿಡಿ : ಮಿತಿಯಾಗಿ ಮಾತಾಡು


ನಾಲಿಗೆ ಸಡಿಲಮಾಡು : ಸಿಕ್ಕಾಪಟ್ಟೆ ಮಾತಾಡು


ನಾಲಿಗೆ ಹರಿತವಾಗಿರು : ಚುರುಕು ಮಾತಾಡು


ನಿತ್ಯಸುಮಂಗಲಿ : ಸೂಳೆ


ನೀರಿಗೆ ಹಾಕು : ವ್ಯರ್ಥಮಾಡು


ನೀರಿನಲ್ಲಿ ಹೋಮ ಮಾಡು : ವ್ಯರ್ಥಮಾಡು


ನೀರು ಕುಡಿಸು : ವಂಚಿಸು, ಸೋಲಿಸು, ಬಹಳ ತೊಂದರೆ ಕೊಡು


ನೀರು ಬೀಳುವ ಕಣ್ಣಿನಲ್ಲಿ ರಕ್ತ ಬೀಳು : ಬಹಳ ಯಾತನೆಯಾಗು


ನುಂಗಿ ನೀರು ಕುಡಿ : ನಾಶಮಾಡು


ನುಣ್ಣಗೆ ಮಾಡು : ಸಂಪೂರ್ಣವಾಗಿ ಹಾಳುಮಾಡು


ನೆಗೆದು ಬೀಳು : ಸಾಯು


ನೆತ್ತಿಗೇರು : ಗರ್ವ ತುಂಬು


ನೆರಳು ಕಂಡರೆ ಆಗದಿರು : ಬದ್ಧದ್ವೇಷದಿಂದಿರು


ನೆಲದ ಮೇಲೆ ನಡೆಯದಿರು : ತುಂಬಾ ಅಹಂಕಾರ ಪಡು


ನೆಲಸಮಮಾಡು : ನಾಶಮಾಡು


ನೊಗಕ್ಕೆ ತಲೆಕೊಡು : ಭಾರ ವಹಿಸಿಕೊಳ್ಳು


ನೊಣಹೊಡೆ : ಕೆಲಸವಿಲ್ಲದೆ ಸೋಮಾರಿಯಾಗಿ ಕುಳಿತಿರು


ಪಂಚಪ್ರಾಣ : ಅತಿಪ್ರಿಯ ವಸ್ತು ಅಥವಾ ವ್ಯಕ್ತಿ


ಪಂಚಾಂಗ ಓದು : ಒಣಹರಟೆ ಹೊಡೆ


ಪಂಚಾಂಗ ಬಿಚ್ಚು : ಒಣಹರಟೆಗೆ ಪ್ರಾರಂಭಿಸು


ಪಾಠಕಲಿಸು : ಬುದ್ಧಿಕಲಿಸು


ಪಾತಾಳಕ್ಕಿಳಿದು ಹೋಗು : ದುಃಖದಿಂದ ಕುಸಿದು ಹೋಗು


ಪಾಷಾಣ ಹೃದಯ : ಕಠಿಣ ಮನಸು


ಪಿಷ್ಟಪೇಷಣ : ಹೇಳಿದ್ದನ್ನೇ ತಿರುಗಿ ತಿರುಗಿ ಹೇಳುವುದು


ಪುಕ್ಕ ಕತ್ತರಿಸು : ಗರ್ವ ಇಳಿಸು, ಹತೋಟಿಯಲ್ಲಿಡುವುದು


ಪುಸ್ತಕದ ಬದನೆಕಾಯಿ : ವ್ಯವಹಾರ ಜ್ಞಾನ ಇಲ್ಲದ


ಪ್ರಪಂಚ ಕಾಣದವ : ಅನನುಭವಿ


ಪ್ರಾಣ ಹಿಂಡು : ಬಹಳವಾಗಿ ಪೀಡಿಸು, ಕಾಟ ಕೊಡು


ಪ್ರಾಣಹೋಗು : ಬಹಳ ಕಷ್ಟವಾಗು ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ. 


ಪ್ರಚಲಿತ ಪೋಸ್ಟ್‌ಗಳು