ಬಿಸ್ಕತ್ ರೊಟ್ಟಿ ಕಮಾಲು

    "ಬಿಸ್ಕತ್ ರೊಟ್ಟಿ" ಕರಾವಳಿ ಭಾಗದ ಅದರಲ್ಲಿಯೂ ಕೊಂಕಣಿ ಸಮುದಾಯದ ಸ್ಪೆಷಲ್ ಖಾದ್ಯ! ಸಂಜೆಯ ತಿಂಡಿ ಸಮಯಕ್ಕೆ ಚಹಾ ಅಥವಾ ಕಾಫಿ ಜೊತೆಗೆ ಒಳ್ಳೆಯ ಜೋಡಿ ಇದು. ಯಾವುದೇ ಪಾನೀಯ ಇಲ್ಲದೆ ಹಾಗೆಯೇ ತಿನ್ನಬಹುದು. 

   ನೋಡಲು ಪೂರಿಯ ಹಾಗೆ ಕಂಡರೂ, ಇದು ಪೂರಿಯ ತರಹ ಮೃದುವಲ್ಲ. ತುಸು ಗಟ್ಟಿ. ಆದರೆ ಹಲ್ಲಿಗೆ ತ್ರಾಸು ಕೊಡುವಷ್ಟು ಅಲ್ಲ. ಇದು ತಿನ್ನಲು ಸಿಹಿ. ಆದರೆ ಅಲ್ಲಲ್ಲಿ ಖಾರದ ಮಿಶ್ರಣವು ಇದೆ. ಹಾಗಾಗಿ ಸಿಹಿ ಮತ್ತು ಖಾರದ ಅದ್ಭುತ ಸಮ್ಮಿಲನ ಇದರಲ್ಲಿದೆ. ನಾಲಿಗೆ ಚಪ್ಪರಿಸಲು ಅಡ್ಡಿಯಿಲ್ಲ!


Captured by VarshaClicks

   ಇದನ್ನು ೨-೩ ದಿನಗಳ ಕಾಲ ಡಬ್ಬಿ ಅಥವಾ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಇಡಬಹುದು. ಆಮೇಲೆ ಮೆಲ್ಲನೆ ಇದು ಮೃದುವಾಗುತ್ತದೆ. ಆದರೆ ತನ್ನ ರುಚಿಯನ್ನು ಬಿಟ್ಟುಕೊಡದೇ ಇರುವುದು ಇದರ ವಿಶೇಷತೆ. ಹಾಗಾಗಿ ಇದನ್ನು ಒಮ್ಮೆ ತಂದರೆ ೨-೩ ದಿನಗಳ ಒಳಗಾಗಿ ಗುಳುಂ ಸ್ವಾಹಾ ಮಾಡಬೇಕು. ರುಚಿ ಒಮ್ಮೆ ಹತ್ತಿತೆಂದರೆ, ತಂದ ದಿನವೇ ಖಾಲಿಯಾದರೂ ಆದೀತು!

ಇದನ್ನೂ ಓದಿ : ಇದು ಗಡ್ ಬಡ್ ಕಥೆ! 

   ಇದನ್ನು ತಯಾರಿಸಲು ಅಷ್ಟೇನೂ ಸಮಯ ಮತ್ತು ಶ್ರಮ ಬೇಕಾಗಿಲ್ಲ. ಆದರೆ ಇದನ್ನು ದುಂಡಗೆ ಮತ್ತು ಬಾಯಿ ಕಟ್ಟುವಂತೆ ರುಚಿಯಾಗಿಸಲು ಶ್ರಮ ಬೇಕಷ್ಟೇ.

   ಬಿಸ್ಕಿಟ್ ರೊಟ್ಟಿ ಅಥವಾ ಬಿಸ್ಕತ್ ರೊಟ್ಟಿ ಒಮ್ಮೆ ತಿಂದರೆ ರುಚಿಯನ್ನು ಉಳಿಸಿಬಿಡುವ ವಿಶಿಷ್ಟ ತಿನಿಸು!


ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.



ಪ್ರಚಲಿತ ಪೋಸ್ಟ್‌ಗಳು