ಇದು ಹೀಗೇನಾ?!
ಸಂಬಂಧಗಳು ಯಾಕೆ ಹೀಗೆ? ಕೆಲವೊಮ್ಮೆ ಯಾವುದೇ ಗೊಂದಲವಿಲ್ಲದೆ ಹೈವೇಯಲ್ಲಿ ಜಂ ಅಂತ ಹೋಗುವ ಕಾರ್ ಹಾಗೆ, ಹೋಗುತ್ತಲೇ ಇರುತ್ತದೆ. ಕೆಲವೊಮ್ಮೆ ಕಿಕ್ಕಿರಿದ ಟ್ರಾಫಿಕ್ ಮಧ್ಯೆ ಕಾರ್ ಅಲ್ಲಿ ಕುಳಿತು ಕಿವಿಗಡಚಿಕ್ಕುವಂತೆ ಹಾರ್ನ್ ಹಾಕಿದ ಹಾಗೆ, ಕಿರಿಕಿರಿ ತಪ್ಪುವುದೇ ಇಲ್ಲ!
ಸಂಬಂಧ ಯಾವುದೇ ಇರಲಿ, ಅಲ್ಲಿ ಬಿಸಿಬಿಸಿ ಮಾತುಕತೆ, ವಾದ, ಚರ್ಚೆ, ಮುನಿಸು ಮಾಮೂಲಿ. ಇದರಿಂದ ಮಾನಸಿಕ ಕಿರಿಕಿರಿ ಅಂತೂ ಖಂಡಿತ. ಆಶ್ಚರ್ಯ ಎನ್ನುವ ಹಾಗೆ, ಇವುಗಳಿಲ್ಲದ ಸಂಬಂಧ ರುಚಿಸುವುದೂ ಇಲ್ಲ!
![]() |
| Captured by VarshaClicks |
ಅಡಿಗೆಯಲ್ಲಿ ಉಪ್ಪು, ಹುಳಿ, ಖಾರ ಮಿಶ್ರಣ ಸರಿಯಾಗಿದ್ದಾಗಲೇ ಊಟ ರುಚಿಸುವ ಹಾಗೆ, ಸಂಬಂಧದಲ್ಲಿ ಇವೆಲ್ಲವೂ ಬೇಕು... ಆದರೆ ಅತಿಯಾಗಬಾರದು, ಹಾಗಂತ ಕಡಿಮೆಯೂ ಆಗಕೂಡದು!
ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.


