ಒಂದು ಕೋಮಲೆಯ ಕಥೆ
ಮೈಸೂರಿನ ಇಕ್ಕೆಲಗಳಲ್ಲಿ ಎದ್ದು ನಿಂತಿದ್ದ ಅರಮನೆಯಂತಹ ಕಟ್ಟಡಗಳನ್ನು ಹಿಂದಿಕ್ಕುತ್ತಾ ಬಸ್ಸು ಮೈಸೂರಿನಿಂದ ಹೊರ ವಲಯಕ್ಕೆ ಧಾವಿಸುತ್ತಿತ್ತು. ಅದು ಮುಂಜಾನೆ 6 ಗಂಟೆಯ ಸಮಯ. ಚಳಿಗೆ ಮೈ ರೋಮಗಳೆಲ್ಲಾ ಪೆರೇಡಿಗೆ ನಿಂತ ಪೊಲೀಸರಂತೆ ಎದ್ದು ನಿಂತಿದ್ದವು. ನಾನು ಮೈ ತುಂಬಾ ಹೊದ್ದುಕೊಂಡಿದ್ದ ಶಾಲನ್ನು ಇನ್ನಷ್ಟು ಬಿಗಿಯಾಗಿ ಸುತ್ತಿಕೊಳುತ್ತಾ, ಕಿಟಕಿಯ ಹೊರಗೆ ನೋಡುತ್ತಾ ಕುಳಿತಿದ್ದೆ. ತೊಡೆಯ ಮೇಲಿದ್ದ ಲ್ಯಾಪ್ ಟಾಪ್ ಬ್ಯಾಗು ಆಗಾಗ ಜಾರುತ್ತಿತ್ತು. ಲ್ಯಾಪ್ ಟಾಪ್ ಮತ್ತು ಬ್ಯಾಗಿನೊಳಗಿದ್ದ ಫೈಲುಗಳನ್ನು ನೆನೆಸಿಕೊಂಡು ಬ್ಯಾಗನ್ನು ತೊಡೆ ಮೇಲೆ ಎಳೆದುಕೊಂಡು ಕುಳಿತೆ.
ಕಾರ್ಯ ನಿಮಿತ್ತ ಬೆಂಗಳೂರಿಗೆ ಹೊರಟಿದ್ದೆ. 'ಐ ಆಮ್ ಡಿವೋರ್ಸಿ' ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಹೆಸರು. ಅಂದ ಹಾಗೆ ನನಗಿನ್ನೂ ಮದುವೆಯಾಗಿರಲಿಲ್ಲ. ವರ್ಷದ ಹಿಂದಷ್ಟೇ ಡಿಗ್ರಿ ಮುಗಿಸಿ ಎಲ್ಲಿಯೂ ಕೆಲಸ ಸಿಗದೇ, 6 ತಿಂಗಳ ಹಿಂದಷ್ಟೇ ಅಚಾನಕ್ ಆಗಿ ಇಲ್ಲಿ ಸೇರಿದ್ದೆ. ನಮ್ಮ ಸಂಸ್ಥೆಯ ಉದ್ದೇಶ ವಿಚ್ಛೇದನ ಪಡೆದುಕೊಂಡ ಹೆಣ್ಣುಮಕ್ಕಳಿಗೆ ಬದುಕುವ ದಾರಿ ತೋರಿಸುವುದು.
ವಿಚಿತ್ರವೆಂದರೆ ದಿನಕ್ಕೆ 5ರಿಂದ 6 ಹೆಣ್ಣುಮಕ್ಕಳು ನಮ್ಮ ಸಂಸ್ಥೆಯ ಬಳಿ ಸಹಾಯ ಬೇಡಿ ಬರುತ್ತಿದ್ದರು. ದಿನಕ್ಕೆ ಇಷ್ಟು ವಿಚ್ಛೇದನಗಳಾಗುತ್ತವೆಯೋ? ಎಂದು ಯೋಚಿಸಿಯೇ ನಾನು ಮದುವೆಯ ಯೋಚನೆ ಕೈ ಬಿಟ್ಟಿದ್ದೆ. ನಾನು PRO ವಿಭಾಗದಲ್ಲಿ ಇದ್ದುದರಿಂದ ಆಗಾಗ ಬೆಂಗಳೂರು, ಮಂಗಳೂರು, ಧಾರವಾಡ, ದಾವಣಗೆರೆಗೆ ಪ್ರಯಾಣ ಬೆಳೆಸುತ್ತಿದ್ದೆ. ಆ ನಾಲ್ಕು ಮಹಾ ನಗರಗಳಲ್ಲಿ ನಮ್ಮ ಶಾಖೆಯಿತ್ತು. ನಮ್ಮ ಮುಖ್ಯ ಸಂಸ್ಥೆ ಇದ್ದಿದ್ದು ಮೈಸೂರಿನಲ್ಲಿ.
ವಿಚ್ಛೇದನ ಪಡೆದುಕೊಂಡ ಹೆಣ್ಣುಮಕ್ಕಳಲ್ಲಿ ವಿದ್ಯಾವಂತರು,ಶ್ರೀಮಂತರು, ಒಳ್ಳೆಯ ಸ್ಥಾನಗಳಲ್ಲಿ ಗುರುತಿಸಿಕೊಂಡವರೂ ಇರುತ್ತಿದ್ದರು. ಅಂಥವರು ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಇತರ ಹೆಣ್ಣುಮಕ್ಕಳಿಗೆ ಕೆಲಸ ಕೊಡಿಸುವ ಅಥವಾ ಸ್ವ ಉದ್ಯೋಗ ಮಾಡುವ ದಾರಿಯನ್ನು ತಿಳಿಸಿಕೊಡುತ್ತಿದ್ದರು. ನಮ್ಮ ಸಂಸ್ಥೆ ಒಂದು ಮಟ್ಟಕ್ಕೆ ಒಳ್ಳೆಯ ಹೆಸರು ಮಾಡಿತ್ತು.

ಇಚ್ಛಾ ಶಕ್ತಿ ಇರುವ ಹೆಣ್ಣುಮಕ್ಕಳ ನಡುವೆ ಕೆಲಸ ಮಾಡುವಾಗ ನನಗೆ ಉತ್ಸಾಹ ಹೆಚ್ಚಾಗುತ್ತಿತ್ತು. ಆದರೆ ಅವರಲ್ಲಿ ಹೆಚ್ಚಿನವರು ಅವರ ಗಂಡನದ್ದೇ ತಪ್ಪು ಎಂದೋ, ನಮ್ಮ ನಡುವೆ ಹೊಂದಾಣಿಕೆ ಇಲ್ಲವೆಂದೋ, ನನಗೆ ಮದುವೆ ಇಷ್ಟವಿರಲಿಲ್ಲ ಅಥವಾ ನಮ್ಮದು ಬಲವಂತದ ಮದುವೆ ಎಂದು ತಮ್ಮ ವಿಚ್ಛೇದನದ ಕಾರಣಗಳನ್ನು ಹೇಳುತ್ತಿದ್ದರು.
ಅವತ್ತು ಕಾನ್ಫರೆನ್ಸ್ ಒಂದರಲ್ಲಿ ಭಾಗವಹಿಸುವ ಸಲುವಾಗಿ ನಮ್ಮ ಸಂಸ್ಥೆಯ ಪ್ರತಿನಿಧಿಯಾಗಿ ಬೆಂಗಳೂರಿಗೆ ಹೊರಟಿದ್ದೆ. 11 ಗಂಟೆಯ ಒಳಗೆ ತಲುಪಬೇಕಾಗಿ ಆಯೋಜಕರು ಹೇಳಿದ್ದರಿಂದ ಬೆಳಗ್ಗಿನ ಬಸ್ಸಿಗೆ ಹೊರಟಿದ್ದೆ.
ಬಸ್ಸು ನಿಧಾನವಾಗಿ ಶ್ರೀರಂಗಪಟ್ಟಣದ ಕಡೆಗೆ ಹೊರಳುತ್ತಿತ್ತು. ಒಂದು ಕಡೆ ಬಸ್ಸು ನಿಂತಾಗ ಹುಡುಗಿಯೊಬ್ಬಳು ನನ್ನ ಪಕ್ಕದಲ್ಲಿ ಖಾಲಿಯಿದ್ದ ಸೀಟಿನಲ್ಲಿ ಬಂದು ಕುಳಿತಳು. ಕೈಯ್ಯಲ್ಲಿ ದೊಡ್ಡದೊಂದು ವ್ಯಾನಿಟಿ ಬ್ಯಾಗ್.

ಒಬ್ಬಳೇ ಕುಳಿತು ಬೇಜಾರು ಬಂದಿದ್ದರಿಂದ ರಂಗಸ್ಥಳಕ್ಕೆ ಬಂದ ಹೊಸ ಪಾತ್ರವನ್ನು ಓರೆಗಣ್ಣಿನಲ್ಲಿ ನೋಡಿದೆ. ಅವಳಿಗೆ ಅಜಮಾಸು ನನ್ನದೇ ವಯಸ್ಸು ಎಂದು ಥಟ್ಟನೆ ಗೊತ್ತಾಯಿತು. ತುಸು ಬಡಕಲು ಶರೀರ. ದೇಹದ ತೂಕಕ್ಕಿಂತ ಬ್ಯಾಗಿನ ತೂಕವೇ ಹೆಚ್ಚಿತ್ತು. ವಯಸ್ಸಿಗೆ ಮೀರಿದ ಪ್ರೌಢತೆ ತುಂಬಿದ್ದ ಅವಳ ಮುಖದಲ್ಲಿ, ನನ್ನನ್ನು ನೋಡಿದ ಕೂಡಲೇ ಕಿರುನಗೆಯೊಂದು ಮೂಡಿತು. ನಾನೂ ಆತ್ಮೀಯತೆಯಿಂದ ಸಣ್ಣದೊಂದು ನಗುವನ್ನು ಅವಳೆಡೆಗೆ ಎಸೆದೆ.
ಬಸ್ಸು ಮುಂದೆ ಚಲಿಸುತ್ತಿದ್ದಂತೆ ಅವಳ ಪರಿಚಯ ಮಾಡಿಕೊಳ್ಳುವ ಸಲುವಾಗಿ ಮೆಲ್ಲಗೆ ಅವಳೆಡೆಗೆ ಬಾಗಿ, 'ನಿಮ್ಮ ಹೆಸರೇನು?' ಎಂದು ಕೇಳಿದೆ. ಅದೇನೋ ಯೋಚನೆಯಲ್ಲಿ ಮುಳುಗಿದ್ದ ಅವಳು ಥಟಕ್ಕನೆ ಹೊರಬಂದು 'ಕೋಮಲಾ' ಅಂದಳು. ನಾನು ಕೈ ಚಾಚಿ 'ನನ್ನ ಹೆಸರು ಸುರುಚಿ' ಎಂದೆ. 'ನಿಮ್ಮ ಹೆಸರು ಚೆನ್ನಾಗಿದೆ' ಎಂದಳು ಕಂಗಳಲ್ಲಿ ಮಿಂಚು ಸೂಸಿ. ನಾನು ಕಣ್ಣು ಮಿಟುಕಿಸುತ್ತಾ 'ಥ್ಯಾಂಕ್ಸ್ ಕೋಮಲಾ' ಎಂದೆ ಹಾರ್ದಿಕವಾಗಿ ನಗುತ್ತಾ.
ನನ್ನ ತೊಡೆಯ ಮೇಲಿದ್ದ ಲ್ಯಾಪ್ ಟಾಪ್ ಬ್ಯಾಗ್ ನೋಡುತ್ತಾ, ಆಗಾಗ ನನ್ನನ್ನು ನೋಡುತ್ತಿದ್ದ ಕೋಮಲಾ, ಕೊನೆಗೊಮ್ಮೆ ಧೈರ್ಯ ವಹಿಸಿ, 'ನೀವು ಆಫೀಸಲ್ಲಿ ಕೆಲಸ ಮಾಡೋದಾ?' ಎಂದಳು. ನಾನು ಹೌದು ಎಂದು ತಲೆ ಅಲ್ಲಾಡಿಸಿದೆ. ನನ್ನ ದುಬಾರಿ ಲ್ಯಾಪ್ ಟಾಪ್, ಪ್ರೊಫೆಷನಲ್ ಬಟ್ಟೆ ನೋಡಿ ಅವಳ ಕಣ್ಣಂಚಲ್ಲಿ ನೀರು ಜಿನುಗಿದ್ದು ನಾನು ಗಮನಿಸಿದೆ. ತಕ್ಷಣವೇ 'ನೀವೆಲ್ಲಿ ಕೆಲಸ ಮಾಡೋದು?' ಎಂದು ಕೇಳಿದೆ. ಅದಕ್ಕವಳು ಏನೋ ಹೇಳಲು ಬಾಯ್ತೆರೆಯುತ್ತಿದ್ದಂತೆ ಹಿಂದಿನಿಂದ ಯಾವುದೋ ಗಡಸು ಗಂಡಸು ಧ್ವನಿ, 'ಈ ಪೀಡೆನಾ ನೋಡ್ಕಳಕ್ಕೆ ನನ್ನಿಂದ ಆಗಲ್ಲ. ನೀನೆ ಎತ್ಕೊ' ಎನ್ನುತ್ತಾ ಬಂದು ಎರಡು ಪುಟ್ಟ ಹಸುಗೂಸುಗಳನ್ನು ಕೋಮಲಾಳ ತೊಡೆಯ ಮೇಲೆ ಎಸೆದಂತೆ ಕೂರಿಸಿ ಹೋದ. ಅವನ ಹಿಂದೆಯೇ ಕೆಟ್ಟ ಸಾರಾಯಿ ವಾಸನೆಯೂ ನನ್ನ ಮೂಗಿಗೆ ಬಡಿಯಿತು.
ನಾನು ಅವಕ್ಕಾಗಿ ಹೋದೆ. ಅವಳಿಗೆ ಅಜಮಾಸು ನನ್ನಷ್ಟೇ ಪ್ರಾಯ ಎಂದರೆ ಮೊನ್ನೆ ಮೊನ್ನೆ 20 ದಾಟಿರಬಹುದು. ಆಗಲೇ ಎರಡು ಮಕ್ಕಳು. ಪುಟ್ಟ ಸಂಸಾರ. ಏನಿದು ಅವಸ್ಥೆ? ನನ್ನ ಮುಖಭಾವನೆಯನ್ನು ಓದಿಕೊಂಡವಳಂತೆ 'ಇದೇ ನನ್ನ ಕೆಲಸ' ಎಂದು ವ್ಯಂಗ್ಯವಾಗಿ ನಕ್ಕಳು ಕೋಮಲಾ.

ನಾನು ಸಾವರಿಸಿಕೊಂಡು ಅವಳು ಸಂಭಾಳಿಸಲು ಕಷ್ಟಪಡುತ್ತಿದ್ದ ಮೊದಲ ಮಗುವನ್ನು ಎತ್ತಿಕೊಂಡೆ. ಲ್ಯಾಪ್ ಟಾಪ್ ಬ್ಯಾಗನ್ನು ಬದಿಯಲ್ಲಿಟ್ಟು ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡೆ. ಅವಳು ವ್ಯಾನಿಟಿ ಬ್ಯಾಗಿನಿಂದ ಅದೇನೇನೋ ವಸ್ತುಗಳನ್ನು ತೆಗೆದು ಸಣ್ಣ ಮಗುವಿನ ಅಳುವನ್ನು ತಹಬದಿಗೆ ತರಲು ಪ್ರಯತ್ನಿಸುತ್ತಿದ್ದಳು.
ಅವಳ ಸಂಸಾರದ ಸ್ಥಿತಿಯನ್ನು ನಾನು ಅದಾಗಲೇ ಅರ್ಧ ಊಹಿಸಿದ್ದೆ. ಕುಡುಕ ಗಂಡ, ಈ ವಯಸ್ಸಿಗೇ ಎರಡು ಮಕ್ಕಳು. ಈ ಮಹಾತಾಯಿ ಅದೇನೇನು ಅನುಭವಿಸಿರಬಹುದೆಂದು ನೆನೆಸಿಯೇ ಮೈ ನಡುಗಿತು. ಪರಿಸ್ಥಿಯನ್ನು ಎದುರಿಸುವ ಸಾಮರ್ಥ್ಯ ಅವಳಲ್ಲಿ ಇದ್ದಂತೆ ತೋರಲಿಲ್ಲ. ನಾನು ಅಂದುಕೊಂಡಂತೆ ಅದು ಕುಡುಕ ಗಂಡನ ಜೊತೆ ಏಗುತ್ತಿರುವ ಸರಿಯಾದ ವಿದ್ಯಾಭ್ಯಾಸವಿಲ್ಲದ, ಆರ್ಥಿಕ ಸ್ವಾತಂತ್ರ್ಯವಿಲ್ಲದ, ಬಲವಂತದ ಮದುವೆಗೆ ಕತ್ತುಒಡ್ಡಿದ ಹೆಣ್ಣಿನ ಕಥೆ. ಕೋಮಲಾ ತನ್ನ ಕಥೆಯನ್ನು ಬಿಕ್ಕುತ್ತಾ ಹೇಳುತ್ತಿದ್ದರೆ, ಅವಳ ಮಕ್ಕಳು ಬಿಡುಗಣ್ಣಿಂದ ಅವಳನ್ನೇ ನೋಡುತ್ತಿದ್ದವು. ನಾನು ಕೊಟ್ಟ ಬಾಟಲಿಯಿಂದ ಅರ್ಧ ನೀರು ಖಾಲಿ ಮಾಡಿ ಒಂದು ನಿಟ್ಟುಸಿರು ಬಿಟ್ಟಳು.

ಇದನ್ನೂ ಓದಿ : ಗುಟ್ಟಾಗಿ ಉಳಿದ ಕಾರಣ
ನಾನು ಆರು ತಿಂಗಳಿನಿಂದ ದುಡಿಯುತ್ತಿದ್ದ ಸಂಸ್ಥೆಯ ಬುದ್ಧಿ ನನ್ನಲ್ಲಿ ಚುರುಕಾಯಿತು. ಮೀನಾಮೇಷ ಎಣಿಸದೆ 'ನೀನ್ಯಾಕೆ ನಿನ್ನ ಗಂಡನಿಂದ ಡಿವೋರ್ಸ್ ತೊಗೋಬಾರ್ದು? ಅವನ ಕಾಟ ಇಲ್ಲದೆ ನೀನೇ ಒಂದು ಸ್ವಂತ ಉದ್ಯೋಗ ಮಾಡಿ ನಿನ್ನ ಮಕ್ಕಳನ್ನ ಸಾಕ್ಬೋದು, ಓದಿಸಬೋದು' ಎಂದು ಅವಳಲ್ಲಿ ಸ್ವತಂತ್ರ ಜೀವನದ ಆಸೆ ಹುಟ್ಟಿಸುವ ಪ್ರಯತ್ನ ಮಾಡಿದೆ.
ಹಾವು ಮೆಟ್ಟಿದವರಂತೆ ಕೋಮಲಾ ತಕ್ಷಣ 'ಹಾಗೆಲ್ಲಾ ಮಾಡಕ್ಕಾಗುತ್ತಾ ಮೇಡಂ' ಎಂದಳು, ಏನೋ ಕೆಟ್ಟ ಮಾತು ಕೇಳಿದವಳಂತೆ. 'ಯಾಕಾಗಲ್ಲ. ಅವ್ನ ಹೊಡೆತ ತಿಂದು ನೀನು, ನಿನ್ನ ಮಕ್ಕಳು ದಿನಾ ಸಾಯೋ ಬದಲು, ಒಂದ್ಸಲ ಅದ್ರಿಂದ ಹೊರಗಡೆ ಬಂದು ನಿಮ್ಮ ಜೀವನ ನೀವು ನೋಡ್ಕೋಬೋದಲ್ಲ' ಎಂದು ನಾನು ಆವೇಶದಲ್ಲಿ ಮಾತನಾಡಿದೆ. 'ನಿಂಗೆ ಒಳ್ಳೆ ಜೀವನ ಮಾಡೋ ದಾರಿ ನಾನು ತೋರಿಸ್ತೀನಿ. ನೀನು ಮನಸು ಮಾಡ್ಬೇಕಷ್ಟೆ' ಎಂದೆ ಕೋಮಲವಾಗಿ. ಅವಳು ಯೋಚಿಸಲಿ ಎಂದು ಮೌನವಾಗಿ ಕುಳಿತೆ. ನಿಧಾನವಾಗಿ ನನಗೆ ನಿದ್ದೆ ಹತ್ತುತ್ತಿತ್ತು.
ಹತ್ತು ನಿಮಿಷ ಕಳೆದ ಮೇಲೆ ಬಸ್ಸು ಒಂದು ಸ್ಟಾಪಿನಲ್ಲಿ ನಿಂತಿತು. ಕೋಮಲಾ ನನ್ನ ತೊಡೆಯ ಮೇಲೆ ತೂಕಡಿಸುತ್ತಿದ್ದ ಮಗುವನ್ನು ಎತ್ತಿಕೊಂಡಳು. ನಿದ್ದೆಯ ಮಂಪರಿನಲ್ಲಿದ್ದ ನಾನು ಕಣ್ಣು ಬಿಡುವುದರೊಳಗೆ ಅವಳ ಮಕ್ಕಳ ಸಮೇತ ಬಸ್ಸಿನಿಂದ ಇಳಿದಿದ್ದಳು. ನಾನು ಕೂತಿದ್ದ ಸೀಟಿನ ಕಿಟಕಿಯ ಹತ್ತಿರ ಬಂದವಳೇ, 'ಮೇಡಂ. ನೀವು ಹೇಳಿದ್ದು ಕೇಳಕ್ಕೆ ಚೆನ್ನಾಗಿದೆ. ನಾನು ನಿಮ್ಮಷ್ಟು ಓದಿಲ್ಲ. ಆದ್ರೂ ಜೀವನ ಏನು ಅಂತ ನೋಡಿದೀನಿ. ಇದೇ ಜೀವನ ಅಲ್ವಾ?'

ಒಂದು ಕ್ಷಣ ತಡೆದು ಕಂಕುಳಿನಿಂದ ಜಾರುತ್ತಿದ್ದ ಮಗುವನ್ನು ಸ್ವಲ್ಪ ಮೇಲಕ್ಕೆತ್ತಿ, 'ಗಂಡ ಇಲ್ದೆ ಹೆಂಗುಸ್ರು ಜೀವನ ಮಾಡೋದ್ ಹೆಂಗೆ? ಗಂಡ ಹೇಗಿದ್ರೂ ಜೀವನ ಮಾಡ್ಕೊಂಡು ಹೋಗು ಅಂತ ನಮ್ಮವ್ವ ಹೇಳಿದ್ದಾಳೆ. ಇದ್ರಿಂದ ಹೊರಗಡೆ ಬಂದ್ರೆ ಇದಕ್ಕಿಂತ ಒಳ್ಳೆ ಜೀವನ ಇದೆ ಅಂತ ನಂಗೊತ್ತು. ಆದ್ರೂ ಬರೋ ಧೈರ್ಯ ನಂಗಿಲ್ಲ. ಹಾಗಾಗಿ ನಮ್ಮವ್ವ ಹೇಳಿದ್ದನ್ನೇ ನಂಬಿಕೊಂಡು ಬದುಕ್ತಾ ಇದ್ದೀನಿ ಮೇಡಂ. ಆದ್ರೂ ನೀವು ಹೇಳಿದ ಜೀವನಾನಾ ನೆನೆಸಿಕೊಂಡೇ ಖುಷಿ ಪಡ್ತೀನಿ ಬುಡಿ' ಎಂದಳು ಅರ್ಧಂಬರ್ಧ ಬಿಕ್ಕುತ್ತಾ.
ಹಿಂದಿನಿಂದ ಅವಳ ಗಂಡ ಅವಳನ್ನು ಗದರಿಸಿ ಕರೆಯುತ್ತಿದ್ದ. ಕೊನೆಯದಾಗಿ ನನ್ನನ್ನು ನೋಡಿ ಮುಗುಳುನಗುವೊಂದನ್ನು ಬೀರಿ, ಕಂಕುಳು ಮತ್ತು ಕೈಯ್ಯಲ್ಲಿದ್ದ ಮಗುವನ್ನು ಸಂಭಾಳಿಸಿಕೊಂಡು ಗಂಡನ ಹಿಂದೆ ನಡೆದಳು.
ನಡೆದ ಘಟನೆಯಿಂದ ಮತ್ತು ಅವಳ ಮಾತುಗಳಿಂದ ಹೊರಬರಲು ನನಗೆ ಬಹಳ ಸಮಯವೇ ಹಿಡಿಯಿತು. ನಮ್ಮ ಸಂಸ್ಥೆಗೆ ಬರುತ್ತಿದ್ದ ಹೆಣ್ಣುಮಕ್ಕಳ ಮತ್ತು ಕೋಮಲಾ ಮನಸ್ಥಿತಿಯನ್ನು ಹೋಲಿಸುತ್ತಾ ಸೀಟಿಗೊರಗಿ ಕಣ್ಣು ಮುಚ್ಚಿದವಳಿಗೆ, ಗಂಡನ ಹಿಂದೆ ಮೂಕ ಪ್ರಾಣಿಯಂತೆ ಹೆಜ್ಜೆ ಹಾಕುತ್ತಿದ್ದ ಕೋಮಲಾ ಮತ್ತವಳ ಮಕ್ಕಳ ಚಿತ್ರವೇ ಕಣ್ಮುಂದೆ ಬಂತು.
ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.