ಕನ್ನಡ ನುಡಿಗಟ್ಟು ಸರಣಿ - ಸಂಚಿಕೆ ೨

 ನಮಸ್ತೆ.


   ಮಾತಿನ ನಡುವೆ ನುಡಿಗಟ್ಟು, ಗಾದೆಗಳನ್ನು ಬಳಸುವುದು ಒಂದು ಬಗೆಯ ಕಲೆಯೇ ಸರಿ. ನಿರ್ದಿಷ್ಟ ಸಂದರ್ಭ, ಸನ್ನಿವೇಶಕ್ಕೆ ಹೊಂದಿಕೊಳ್ಳುವಂತೆ ಇವುಗಳನ್ನು ಬಳಸುವವರು ಕಲಾವಿದರು!


  ನುಡಿಗಟ್ಟುಗಳ ಬಳಕೆ ತುಸು ಕಡಿಮೆಯಾದರೂ, ಅವುಗಳಲ್ಲೊಂದು ಸೊಗಸಿದೆ. ಆ ಸೊಗಸಿನ ಪರಿಚಯಕ್ಕಾಗಿಯೇ ಆರಂಭಿಸಲಾದ ಸರಣಿಯಿದು.


ಪ್ರತೀ ಸಂಚಿಕೆಯಲ್ಲಿ ಒಂದಿಷ್ಟು ನುಡಿಗಟ್ಟುಗಳನ್ನು ಅವುಗಳ ಅರ್ಥ ಸಹಿತ ನೀಡುವ ಪುಟ್ಟ ಪ್ರಯತ್ನವಿದು. ಅಗತ್ಯವಿದ್ದಲ್ಲಿ ಉದಾಹರಣೆ ಹಾಗೂ ವ್ಯಾಖ್ಯಾನಗಳನ್ನು ನೀಡಲಾಗುವುದು. 


ಇದನ್ನೂ ಓದಿ : ಕನ್ನಡ ನುಡಿಗಟ್ಟು ಸರಣಿ - ಸಂಚಿಕೆ ೧




  ಇವುಗಳನ್ನು ಕನ್ನಡ ಶಬ್ದಕೋಶದಿಂದ ಎರವಲು ಪಡೆಯಲಾಗಿದೆ. ವರ್ಣಮಾಲೆಯ ಕ್ರಮಾನುಸಾರವಾಗಿ ಪ್ರತೀ ಸಂಚಿಕೆಯಲ್ಲಿ ನುಡಿಗಟ್ಟುಗಳನ್ನು ನೀಡಲಾಗುತ್ತದೆ. ನಮ್ಮ ದೈನಂದಿನ ಮಾತುಕತೆಯಲ್ಲಿ, ಬರವಣಿಗೆಯಲ್ಲಿ ಇವುಗಳನ್ನು ಹಾಸುಹೊಕ್ಕಾಗಿಸಲು ಪ್ರಯತ್ನಿಸೋಣ.


ಸಂಚಿಕೆ ೨


ಇಂದ್ರ ಚಂದ್ರ ಅನ್ನು : ಅತಿಯಾಗು ಹೊಗಳು

ಇಕ್ಕಳ ಹಾಕು : ಒತ್ತಾಯದ ಪ್ರಚೋದನೆ ಮಾಡು

ಇತಿಶ್ರೀ : ಮುಕ್ತಾಯ, ಕೊನೆ

ಇಲ್ಲಿಯ ಕಡ್ಡಿಯನ್ನು ಅಲ್ಲಿ ಎತ್ತಿ ಇಡದಿರು : ಯಾವ ಕೆಲಸವನ್ನೂ ಮಾಡದಿರು

ಇಹಲೋಕದ ಯಾತ್ರೆ ಮುಗಿಸು : ಸಾಯು

ಉಕ್ಕಿನ ಕಡಲೆ : ತುಂಬಾ ಗಹನವಾದ ಸಂಗತಿ, ಅತ್ಯಂತ ಕಠಿಣವಾದ ವಿಷಯ

ಉತ್ಸವಮೂರ್ತಿ : ಚೆಲುವ, ಕೆಲಸ ಮಾಡದೇ ಆಲಸ್ಯದಿಂದಿರುವವನು

ಉಪ್ಪಿಡು : ಅನ್ನ ಹಾಕು, ಕಾಪಾಡು

ಉಪ್ಪಿಲ್ಲ ಹುಳಿಯಿಲ್ಲ : ನೀರಸವಾದುದು, ಸ್ವಾರಸ್ಯವಿಲ್ಲದ್ದು

ಉಪ್ಪು ಖಾರ ಹಚ್ಚು : ಇಲ್ಲದ್ದನ್ನು ಸೇರಿಸು

ಉಭಯಸಂಕಟ : ಸಂದಿಗ್ಧ ಸ್ಥಿತಿ

ಉರಿದು ಬೀಳು : ಬಹುವಾಗಿ ರೇಗು

ಉರಿ ಹೊತ್ತಿಸು : ತುಂಬಾ ರೇಗಿಸು, ವೈಷಮ್ಯ ಹುಟ್ಟಿಸು

ಎಂಜಲಿಗೆ ಕೈಯ್ಯೊಡ್ಡು : ಹಂಗಿಗೆ ಒಳಗಾಗು

ಎಂಜಲು ಕೈಯ್ಯಲ್ಲಿ ಕಾಗೆ ಓಡಿಸದವ : ಜಿಪುಣ

ಎಕ್ಕ ಹುಟ್ಟಿ ಹೋಗು : ಹಾಳಾಗು

ಎಡವಿದ ಕಡ್ಡಿ ಎತ್ತದಿರು : ಸೋಮಾರಿಯಾಗು, ಎತ್ತಂಗಡಿಯಾಗು, ವರ್ಗವಾಗು, ದಿವಾಳಿ ತೆಗೆ

ಎತ್ತಿದ ಕೈ : ಪ್ರವೀಣ

ಎತ್ತಿದವರ ಕೈಗೂಸು : ಸ್ವ ಬುದ್ಧಿ ಇಲ್ಲದವ

ಎದುರು ಹಾಕಿಕೊಳ್ಳು : ವಿರೋಧ ಕಟ್ಟಿಕೊಳ್ಳು

ಎದೆಗಟ್ಟಿ ಮಾಡಿಕೊಳ್ಳು : ಧೈರ್ಯ ತಂದುಕೊಳ್ಳು

ಎದೆತಟ್ಟಿ ಹೇಳು : ಧೈರ್ಯದಿಂದ ಹೇಳು

ಎದೆತುಂಬಿಬರುವುದು : ಭಾವೋದ್ವೇಗವುಂಟಾಗುವುದು

ಎದೆಭಾರವಾಗುವುದು : ದುಃಖವಾಗುವುದು

ಎದೆಮಾಡು : ಸಾಹಸಮಾಡು

ಎದೆಯ ಮೇಲಿನ ಭಾರ ಇಳಿಸು : ಹೊಣೆಗಾರಿಕೆ ಕಡಿಮೆ ಮಾಡಿಕೊಳ್ಳು

ಎದೆಯ ಮೇಲೆ ಕುಳಿತುಕೊಳ್ಳು : ಮೇಲ್ವಿಚಾರಣೆ ನಡೆಸಿ ಕೆಲಸ ತೆಗೆದುಕೊಳ್ಳು, ಅತಿ ಅವಸರ ಪಡಿಸು



ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.


ಪ್ರಚಲಿತ ಪೋಸ್ಟ್‌ಗಳು