ಸಂಧ್ಯಾಕಾಲದ ಸೊಬಗು


     'ಸಂಜೆ' ದಿನದ ಅತ್ಯಂತ ಸುಂದರ ಭಾಗವೆಂಬುದು ನನ್ನ ಅಭಿಪ್ರಾಯ. ಹಗಲಿನ ಸಮಯ ಕಳೆದು,  ರಾತ್ರಿಯು ಮೆಲ್ಲಗೆ ಕಾಲಿಡುವ ಈ ಘಳಿಗೆ ಮನಮೋಹಕ. ದಿನವನ್ನೆಲ್ಲಾ ಬೆಳಗುವ ಸೂರ್ಯ ಮೆಲ್ಲಗೆ ಜಾರುತ್ತಾ ಮನೆಗೆ ವಿಶ್ರಾಂತಿಗೆಂದು ತೆರಳುವಾಗ, ಚಂದ್ರ ತನ್ನ ಪಾಳಿಯನ್ನು ಆರಂಭಿಸುತ್ತಾನೆ. ತಾರೆಗಳು ಸ್ವಲ್ಪ ಜಾಸ್ತಿ ಕತ್ತಲೆ ಆಗಲಿ ಎಂದು ಕಾಯುತ್ತಾ ಕುಳಿತಿರುತ್ತವೆ. ಈ ಸಮಯವನ್ನು ಸೆರೆ ಹಿಡಿಯುವ ಪ್ರಯತ್ನ ಯಾವತ್ತೂ ಸುಂದರ ಅನುಭವ! ಅದು ಕಣ್ಣಿಗೆ ಕಾಣುವಷ್ಟು ಸುಂದರವಾಗಿ ಕ್ಯಾಮರಾ ಕಣ್ಣುಗಳು ಸೆರೆಹಿಡಿಯಲಾರವು ಎಂಬುದು ಅಷ್ಟೇ ಸತ್ಯ... 



ಮುಗಿಲ ಮಾರಿಗೆ ರಾಗ ರತಿಯ ನಂಜ ಏರಿತ್ತ.. ಆಗ ಸಂಜೀಯಾಗಿತ್ತ... 



ಈ ಸಂಜೆ ಏಕೆ ಜಾರುತಿದೆ...



ಈ ಸೊಗಸಾದ ಸಂಜೆ ನಿನ್ನನ್ನೇ ನೋಡುತಾ ನನ್ನನ್ನೇ ಮರೆತೆ... 



ಈ ಸಂಜೆ ಯಾಕಾಗಿದೆ...?



ನಾ ಈ ಸಂಜೆಗೆ ಆ ಬಾನನು ತಾರೆಯ ಜೊತೆ ಸೇರಿ ಅಲಂಕರಿಸಲೇ...




ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ. 



ಪ್ರಚಲಿತ ಪೋಸ್ಟ್‌ಗಳು