ಕನ್ನಡ ನುಡಿಗಟ್ಟು ಸರಣಿ - ಸಂಚಿಕೆ ೫
ನಮಸ್ತೆ.
ಮಾತಿನ ನಡುವೆ ನುಡಿಗಟ್ಟು, ಗಾದೆಗಳನ್ನು ಬಳಸುವುದು ಒಂದು ಬಗೆಯ ಕಲೆಯೇ ಸರಿ. ನಿರ್ದಿಷ್ಟ ಸಂದರ್ಭ, ಸನ್ನಿವೇಶಕ್ಕೆ ಹೊಂದಿಕೊಳ್ಳುವಂತೆ ಇವುಗಳನ್ನು ಬಳಸುವವರು ಕಲಾವಿದರು!
ನುಡಿಗಟ್ಟುಗಳ ಬಳಕೆ ತುಸು ಕಡಿಮೆಯಾದರೂ, ಅವುಗಳಲ್ಲೊಂದು ಸೊಗಸಿದೆ. ಆ ಸೊಗಸಿನ ಪರಿಚಯಕ್ಕಾಗಿಯೇ ಆರಂಭಿಸಲಾದ ಸರಣಿಯಿದು.
ಪ್ರತೀ ಸಂಚಿಕೆಯಲ್ಲಿ ಒಂದಿಷ್ಟು ನುಡಿಗಟ್ಟುಗಳನ್ನು ಅವುಗಳ ಅರ್ಥ ಸಹಿತ ನೀಡುವ ಪುಟ್ಟ ಪ್ರಯತ್ನವಿದು. ಅಗತ್ಯವಿದ್ದಲ್ಲಿ ಉದಾಹರಣೆ ಹಾಗೂ ವ್ಯಾಖ್ಯಾನಗಳನ್ನು ನೀಡಲಾಗುವುದು.
ಇವುಗಳನ್ನು ಕನ್ನಡ ಶಬ್ದಕೋಶದಿಂದ ಎರವಲು ಪಡೆಯಲಾಗಿದೆ. ವರ್ಣಮಾಲೆಯ ಕ್ರಮಾನುಸಾರವಾಗಿ ಪ್ರತೀ ಸಂಚಿಕೆಯಲ್ಲಿ ನುಡಿಗಟ್ಟುಗಳನ್ನು ನೀಡಲಾಗುತ್ತದೆ. ನಮ್ಮ ದೈನಂದಿನ ಮಾತುಕತೆಯಲ್ಲಿ, ಬರವಣಿಗೆಯಲ್ಲಿ ಇವುಗಳನ್ನು ಹಾಸುಹೊಕ್ಕಾಗಿಸಲು ಪ್ರಯತ್ನಿಸೋಣ.
ಇದನ್ನೂ ಓದಿ : ಕನ್ನಡ ನುಡಿಗಟ್ಟು ಸರಣಿ - ಸಂಚಿಕೆ ೪
ಸಂಚಿಕೆ ೫
ಕಣ್ಣುತಪ್ಪಿಸು : ಮರೆಯಾಗು
ಕಣ್ಣುತಾಗು : ದೃಷ್ಟಿಯಾಗು
ಕಣ್ಣುತಿರುಗು : ಗಮನ ಹರಿ
ಕಣ್ಣು ಬಿಡು : ಹುಟ್ಟು, ದಯೆ ತೋರು, ಲಕ್ಷ್ಯದಲ್ಲಿ ತಂದುಕೋ
ಕಣ್ಣು ಬೀಳು : ಲಕ್ಷ್ಯ ಬೀಳು
ಕಣ್ಣು ಮುಚ್ಚಿ : ಹಿಂದೆ ಮುಂದೆ ನೋಡದೆ
ಕಣ್ಣುಮುಚ್ಚು : ಸಾಯು
ಕಣ್ಣುರಿ : ಅಸೂಯೆ, ಹೊಟ್ಟೆಕಿಚ್ಚು
ಕಣ್ಣುಹಾಕು : ಆಶಿಸು
ಕಣ್ಣುಹಾಯಿಸು : ಮೇಲು ಮೇಲಕ್ಕೆ ನೋಡು, ಸ್ಥೂಲವಾಗಿ ಪರಿಶೀಲಿಸು
ಕಣ್ಣೊರೆಸು : ಸಮಾಧಾನ ಮಾಡು
ಕಣ್ಮಣಿ : ಪ್ರೀತಿಪಾತ್ರವಾದದ್ದು
ಕತ್ತರಿಹಾಕು : ಕದಿ, ಕಿತ್ತುಕೊಳ್ಳು
ಕತ್ತಿಕಟ್ಟು : ಯುದ್ಧಕ್ಕೆ ಸಿದ್ಧನಾಗು, ದ್ವೇಷಿಸು
ಕತ್ತಿ ಮಸೆ : ಹಗೆಸಾಧಿಸು
ಕತೆ ಮುಗಿ : ಶಕ್ತಿ, ಪ್ರಭಾವ ಮುಂತಾದವು ತೀರಾ ಕುಗ್ಗಿ ಹೋಗು, ಸಾಯು
ಕತ್ತೆದುಡಿತ : ವಿಪರೀತ ಕೆಲಸ
ಕನಸಿನ ಗಂಟು : ಅಲಭ್ಯವಾದುದು
ಕನಸಿನ ಗೋಪುರ : ಭ್ರಮೆ, ಫಲಿಸದ ಆಸೆ
ಕನ್ನಡಿಯೊಳಗಿನ ಗಂಟು : ಅಲಭ್ಯವಾದುದು
ಕಪಾಲಮೋಕ್ಷ : ಕೆನ್ನೆಗೆ ಏಟು
ಕಪಿಮುಷ್ಟಿ : ಬಿಗಿಯಾದ ಹಿಡಿತ
ಕಬ್ಬಿಣದ ಕಡಲೆ : ತುಂಬಾ ಗಹನವಾದ, ಕಠಿಣವಾದ ವಿಷಯ
ಕರುಳು ಕತ್ತರಿಸು : ಮನಸ್ಸಿಗೆ ತೀಕ್ಷ್ಣವಾದ ನೋವುಂಟುಮಾಡು
ಕರುಳು ಕಿತ್ತುಬರು : ಬಹಳ ದುಃಖವಾಗು
ಕರುಳುಹಿಂಡು : ಬಹಳ ಸಂಕಟವಾಗು, ಹೃದಯ ಕಲಕು
ಕಲ್ಲುಮನಸ್ಸು : ಕಠಿಣ ಮನಸ್ಸು
ಕಲ್ಲುಹಾಕು : ವಿಘ್ನವುಂಟುಮಾಡು
ಕಸದ ಬುಟ್ಟಿಯಲ್ಲಿ ಹಾಕು : ಅಲಕ್ಷಿಸು, ತಿರಸ್ಕರಿಸು
ಕಾಮಾಲೆಕಣ್ಣಿನಿಂದ ನೋಡು : ಸಹಜವಲ್ಲದ ದೃಷ್ಟಿಯಿಂದ ನೋಡು
ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.


