ಕನ್ನಡ ನುಡಿಗಟ್ಟು ಸರಣಿ - ಸಂಚಿಕೆ ೪
ನಮಸ್ತೆ.
ಮಾತಿನ ನಡುವೆ ನುಡಿಗಟ್ಟು, ಗಾದೆಗಳನ್ನು ಬಳಸುವುದು ಒಂದು ಬಗೆಯ ಕಲೆಯೇ ಸರಿ. ನಿರ್ದಿಷ್ಟ ಸಂದರ್ಭ, ಸನ್ನಿವೇಶಕ್ಕೆ ಹೊಂದಿಕೊಳ್ಳುವಂತೆ ಇವುಗಳನ್ನು ಬಳಸುವವರು ಕಲಾವಿದರು!
ನುಡಿಗಟ್ಟುಗಳ ಬಳಕೆ ತುಸು ಕಡಿಮೆಯಾದರೂ, ಅವುಗಳಲ್ಲೊಂದು ಸೊಗಸಿದೆ. ಆ ಸೊಗಸಿನ ಪರಿಚಯಕ್ಕಾಗಿಯೇ ಆರಂಭಿಸಲಾದ ಸರಣಿಯಿದು.
ಪ್ರತೀ ಸಂಚಿಕೆಯಲ್ಲಿ ಒಂದಿಷ್ಟು ನುಡಿಗಟ್ಟುಗಳನ್ನು ಅವುಗಳ ಅರ್ಥ ಸಹಿತ ನೀಡುವ ಪುಟ್ಟ ಪ್ರಯತ್ನವಿದು. ಅಗತ್ಯವಿದ್ದಲ್ಲಿ ಉದಾಹರಣೆ ಹಾಗೂ ವ್ಯಾಖ್ಯಾನಗಳನ್ನು ನೀಡಲಾಗುವುದು.
ಇದನ್ನೂ ಓದಿ : ಕನ್ನಡ ನುಡಿಗಟ್ಟು ಸರಣಿ - ಸಂಚಿಕೆ ೩
ಇವುಗಳನ್ನು ಕನ್ನಡ ಶಬ್ದಕೋಶದಿಂದ ಎರವಲು ಪಡೆಯಲಾಗಿದೆ. ವರ್ಣಮಾಲೆಯ ಕ್ರಮಾನುಸಾರವಾಗಿ ಪ್ರತೀ ಸಂಚಿಕೆಯಲ್ಲಿ ನುಡಿಗಟ್ಟುಗಳನ್ನು ನೀಡಲಾಗುತ್ತದೆ. ನಮ್ಮ ದೈನಂದಿನ ಮಾತುಕತೆಯಲ್ಲಿ, ಬರವಣಿಗೆಯಲ್ಲಿ ಇವುಗಳನ್ನು ಹಾಸುಹೊಕ್ಕಾಗಿಸಲು ಪ್ರಯತ್ನಿಸೋಣ.
ಸಂಚಿಕೆ ೪
ಕಂಕಣಬದ್ಧನಾಗು : ಸಂಕಲ್ಪಮಾಡು
ಕಂತೆಪುರಾಣ : ಯಾರಿಗೂ ಬೇಡವಾದ ಹಳೆಯ ವಿಚಾರ
ಕಂತೆಬಿಚ್ಚು : ಹಳೆಯ ಮತ್ತು ಸುಳ್ಳಾದ ವಿಷಯವನ್ನು ಹೇಳತೊಡಗು
ಕಂಬಿಕೀಳು : ಓಡಿ ಹೋಗು
ಕಗ್ಗಂಟು : ಬಗೆಹರಿಸಲಾಗದ ಸಮಸ್ಯೆ
(ಆಂಗ್ಲ ಭಾಷೆಯ 'ಗಾರ್ಡಿಯನ್ ನಾಟ್' ನುಡಿಗಟ್ಟನ್ನು ಇಲ್ಲಿ ಹೋಲಿಸಬಹುದು)
ಕಚ್ಚೆಕಟ್ಟು : ಸಿದ್ಧನಾಗು
ಕಟ್ಟಿಟ್ಟ ಬುತ್ತಿ : ಅನುಭವಿಸಲೇಬೇಕಾಗಿರುವುದು
ಕಟ್ಟಿಡು : ಮೀಸಲಾಗಿಡು, ಬದಿಗಿರಿಸು
ಕಟ್ಟುಕತೆ : ಸುಳ್ಳುಮಾತು, ಸುಳ್ಳು ಪ್ರಸಂಗ
ಕಟ್ಟೆಪುರಾಣ : ಕಾಡುಹರಟೆ, ವ್ಯರ್ಥಚರ್ಚೆ
ಕಡಿದು ತೋರಣಕಟ್ಟು : ಶಿಕ್ಷಿಸು
ಕಡಿವಾಣ ಹಾಕು : ಹತೋಟಿಯಲ್ಲಿಡು
ಕಣಕ್ಕೆ ಇಳಿ : ಕರೆಗೆ ಸಿದ್ಧನಾಗಿ ನಿಲ್ಲು, ಹೋರಾಟಕ್ಕೆ ತೊಡಗು
ಕಣ್ಣಾಡಿಸು : ಸ್ಥೂಲವಾಗಿ ಪರಿಶೀಲಿಸು, ಮೇಲು ಮೇಲಕ್ಕೆ ನೋಡು
ಕಣ್ಣಿಗೆ ಮಣ್ಣೆರಚು : ಮೋಸಮಾಡು
ಕಣ್ಣಿಗೆ ಹಬ್ಬವಾಗು : ನೋಡಿ ಸಂತಸಪಡು
ಕಣ್ಣಿಗೆ ಹೊಡೆ : ಸ್ಪಷ್ಟವಾಗಿ ಕಾಣಿಸಿಕೊಳ್ಳು
ಕಣ್ಣಿನಲ್ಲಿ ಎಣ್ಣೆ ಹಾಕಿ ನೋಡು : ಜಾಗರೂಕತೆಯಿಂದ ಹುಡುಕು, ಸೂಕ್ಷ್ಮವಾಗಿ ಪರಿಶೀಲಿಸು
ಕಣ್ಣಿನಲ್ಲಿ ಕಣ್ಣಿಟ್ಟು ನೋಡು : ಬಹಳ ಎಚ್ಚರಿಕೆಯಿಂದ ನೋಡು
ಕಣ್ಣಿನಲ್ಲಿ ರಕ್ತಬರುವುದು : ಬಹಳ ಯಾತನೆಯಾಗುವುದು, ಕಷ್ಟಪಡುವುದು
ಕಣ್ಣಿನಿಂದ ಕೆಂಡಕಾರು : ಬಹಳ ಸಿಟ್ಟಾಗು
ಕಣ್ಣೀರಿನಲ್ಲಿ ಕೈತೊಳೆ : ಬಹಳ ದುಃಖವನ್ನು, ಕಷ್ಟವನ್ನು ಅನುಭವಿಸು
ಕಣ್ಣುಕಣ್ಣು ಬಿಡು : ಮಿಡುಕಾಡು, ಒದ್ದಾಡು, ಪರದಾಡು
ಕಣ್ಣುಕೀಳು : ನೋಟವನ್ನು ಬೇರೆಡೆಗೆ ಬದಲಿಸು
ಕಣ್ಣು ಕೆಂಡಮಾಡು : ಬಹಳ ಸಿಟ್ಟಾಗು
ಕಣ್ಣು ಕೆಂಪಾಗು : ಕೋಪವುಂಟಾಗುವುದು
ಕಣ್ಣುಗುಡ್ಡೆ ಮೇಲಕ್ಕೆ ಸಿಕ್ಕಿಕೊಳ್ಳು : ಕಷ್ಟಕ್ಕೆ ಸಿಕ್ಕಿಕೊಳ್ಳುವುದು
ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.
