ಕನ್ನಡ ನುಡಿಗಟ್ಟು ಸರಣಿ - ಸಂಚಿಕೆ ೬

  ನಮಸ್ತೆ.


   ಮಾತಿನ ನಡುವೆ ನುಡಿಗಟ್ಟು, ಗಾದೆಗಳನ್ನು ಬಳಸುವುದು ಒಂದು ಬಗೆಯ ಕಲೆಯೇ ಸರಿ. ನಿರ್ದಿಷ್ಟ ಸಂದರ್ಭ, ಸನ್ನಿವೇಶಕ್ಕೆ ಹೊಂದಿಕೊಳ್ಳುವಂತೆ ಇವುಗಳನ್ನು ಬಳಸುವವರು ಕಲಾವಿದರು!


  ನುಡಿಗಟ್ಟುಗಳ ಬಳಕೆ ತುಸು ಕಡಿಮೆಯಾದರೂ, ಅವುಗಳಲ್ಲೊಂದು ಸೊಗಸಿದೆ. ಆ ಸೊಗಸಿನ ಪರಿಚಯಕ್ಕಾಗಿಯೇ ಆರಂಭಿಸಲಾದ ಸರಣಿಯಿದು.


ಪ್ರತೀ ಸಂಚಿಕೆಯಲ್ಲಿ ಒಂದಿಷ್ಟು ನುಡಿಗಟ್ಟುಗಳನ್ನು ಅವುಗಳ ಅರ್ಥ ಸಹಿತ ನೀಡುವ ಪುಟ್ಟ ಪ್ರಯತ್ನವಿದು. ಅಗತ್ಯವಿದ್ದಲ್ಲಿ ಉದಾಹರಣೆ ಹಾಗೂ ವ್ಯಾಖ್ಯಾನಗಳನ್ನು ನೀಡಲಾಗುವುದು. 


ಇದನ್ನೂ ಓದಿ : ಕನ್ನಡ ನುಡಿಗಟ್ಟು ಸರಣಿ - ಸಂಚಿಕೆ ೫




  ಇವುಗಳನ್ನು ಕನ್ನಡ ಶಬ್ದಕೋಶದಿಂದ ಎರವಲು ಪಡೆಯಲಾಗಿದೆ. ವರ್ಣಮಾಲೆಯ ಕ್ರಮಾನುಸಾರವಾಗಿ ಪ್ರತೀ ಸಂಚಿಕೆಯಲ್ಲಿ ನುಡಿಗಟ್ಟುಗಳನ್ನು ನೀಡಲಾಗುತ್ತದೆ. ನಮ್ಮ ದೈನಂದಿನ ಮಾತುಕತೆಯಲ್ಲಿ, ಬರವಣಿಗೆಯಲ್ಲಿ ಇವುಗಳನ್ನು ಹಾಸುಹೊಕ್ಕಾಗಿಸಲು ಪ್ರಯತ್ನಿಸೋಣ.


                                                                        ಸಂಚಿಕೆ ೬

ಕಾಲಾಡು : ತಿರುಗಾಡು, ಸುತ್ತಾಡು


ಕಾಲಿಗೆ ಬುದ್ಧಿಹೇಳು : ಓಡು


ಕಾಲುಕಟ್ಟು : ಯಾಚಿಸು, ದೈನ್ಯದಿಂದ ಕೇಳು


ಕಾಲುಕೀಳು : ಹೊರಡು


ಕಾಲೂರು : ನೆಲೆಯಾಗಿ ನಿಲ್ಲು


ಕಾಲೆಳೆದುಕೊಂಡು ಹೋಗು : ನಿಧಾನವಾಗಿ ನಡಿ


ಕಾಸಿಗೂ ಕಡೆ : ಅಪ್ರಯೋಜಕ


ಕಾಸಿಗೊಂದು ಕೊಸರಿಗೆರಡು : ಬಹಳ ಅಗ್ಗವಾಗಿ ಸಿಗುವ ವಸ್ತು


ಕಿಡಿಕಾರು : ಸಿಟ್ಟಿಗೇಳು, ಉರಿದುಬೀಳು


ಕಿರುಬೆರಳಲ್ಲಿ ಕುಣಿಸು : ಹೇಳಿದಂತೆ ಕೇಳುವ ಹಾಗೆ ಮಾಡು


ಕಿವಿಕಚ್ಚು : ಚಾಡಿ ಹೇಳು


ಕಿವಿಕೊಟ್ಟು ಕೇಳು : ಗಮನವಿಟ್ಟು ಕೇಳು


ಕಿವಿಕೊಡು : ತಲ್ಲೀನತೆಯಿಂದ ಕೇಳು


ಕಿವಿಗೆ ಬೀಳು : ಆಕಸ್ಮಿಕವಾಗಿ ಕೇಳು


ಕಿವಿಗೆ ಹಬ್ಬವಾಗು : ಕೇಳಿ ಸಂತೋಷವುಂಟಾಗು


ಕಿವಿ ನೆಟ್ಟಗಾಗು : ಕೇಳುವ ಆಸಕ್ತಿ ಹೆಚ್ಚಾಗು


ಕಿವಿಯ ಮೇಲೆ ಹಾಕಿಕೊಳ್ಳು : ಸರಿಯಾಗಿ ಕೇಳು


ಕುಡಿವ ನೀರು ಅಲ್ಲಾಡದೆ : ಏನೂ ತೊಂದರೆಯಾಗದೆ


ಕುತ್ತಿಗೆ ಕೊಯ್ಯಿ : ಮೋಸಮಾಡು, ವಿಶ್ವಾಸಘಾತ ಮಾಡು


ಕುತ್ತಿಗೆಗೆ ಕಟ್ಟಿಕೊಳ್ಳು : ಹೊಣೆ ಹೊತ್ತುಕೊಳ್ಳು, ಮದುವೆಯಾಗು


ಕುರುಡುನಂಬಿಕೆ : ವಿವೇಕವಿಲ್ಲದ ನಂಬಿಕೆ


ಕೂದಲು ಕೊಂಕದಿರು : ಕೆಡುಕಾಗದಿರು


ಕೂಪಮಂಡೂಕ : ಸಂಕುಚಿತ ವಿಚಾರವುಳ್ಳ, ಲೋಕಾನುಭವವಿಲ್ಲದವ


ಕೈಯಿಡು : ಕಾರ್ಯದಲ್ಲಿ ತೊಡಗು, ಉದ್ಯೋಗಿಸು


ಕೈಕಚ್ಚು : ನಷ್ಟವಾಗು


ಕೈಕಟ್ಟಿ ಕೂಡು : ನಿರುಪಾಯನಾಗು


ಕೈಕಟ್ಟು : ನಿಯಂತ್ರಿಸು, ತಡೆ


ಕೈಕಾಲು ಬಿಡು : ಧೈರ್ಯಗೆಡು


ಕೈಕೊಡು : ಮೋಸಮಾಡು ಕೈಗೆ ಕರಟ ಕೊಡು : ತೀರಾ ಬಡವನನ್ನಾಗಿ ಮಾಡು ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ. 



ಪ್ರಚಲಿತ ಪೋಸ್ಟ್‌ಗಳು